Home
ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಅಧಿನಿಯಮ -2011(Karnataka Guarantee of Services Act - 2011) ![]()
======================================================================================================================
ಸಾಲಿಗ್ರಾಮ ಪಟ್ಟಣ ಪಂಚಾಯತಿಯ ಮಾಹಿತಿ:-
ಸಾಲಿಗ್ರಾಮ ಪಟ್ಟಣವು ಭಾರತ ದೇಶದ, ಕರ್ನಾಟಕ ರಾಜ್ಯದ, ಉಡುಪಿ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದೆ. ಉಡುಪಿಯಿಂದ ಈ ಪಟ್ಟಣವು ಸುಮಾರು 20 ಕಿ.ಮೀ. ದೂರದಲ್ಲಿದೆ. ನಾವು ಉಡುಪಿಯಿಂದ ಕುಂದಾಪುರಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿ 17 ರ ಮಾರ್ಗದ ಬದಿಯಲ್ಲಿ ಸಾಲಿಗ್ರಾಮ ಪಟ್ಟಣವು ಕಂಡು ಬರುತ್ತದೆ. ಹಿಂದು ವೈಶ್ಣವರು ಪೂಜಿಸುವ ಪವಿತ್ರವಾದ ಸಾಲಿಗ್ರಾಮ ಶಿಲೆಯಿಂದಾಗಿ "ಸಾಲಿಗ್ರಾಮ" ಎಂಬ ಹೆಸರು ಈ ಗ್ರಾಮಕ್ಕೆ ಬಂದಿರುತ್ತದೆ. ಸಾಲಿಗ್ರಾಮ ಶಿಲೆ ಶ್ರೀ. ವಿಷ್ಣುವಿನ ದೈವಿಕ ಲಾಂಛನವಾಗಿದೆ. ಜ್ಞಾನಪೀಠ ಮತ್ತು ಪದ್ಮಭೂಷಣ ಪ್ರಶಸ್ತಿ ಪಡೆದಿರುವ ಪ್ರಸಿದ್ಧ ಕನ್ನಡದ ಕವಿ ಶ್ರೀ. ಕೆ. ಶಿವರಾಮ ಕಾರಂತರ ಜನನ ಸ್ಥಳ ಈ ಸಾಲಿಗ್ರಾಮವಾಗಿರುತ್ತದೆ. ಬೃಹತ್ ಪುಸ್ತಕ ಸಂಗ್ರಹಣೆಯಿರುವ ಹಾಗೂ ಭಕ್ತರು ಶಾಂತಿಯಿಂದ ಪ್ರಾರ್ಥನೆ ಮತ್ತು ಧ್ಯಾನ ಮಾಡಲು "ಡಿವೈನ್ ಪಾರ್ಕ್" ಎಂಬ ಪವಿತ್ ಸ್ಥಳವು ಈ ಗ್ರಾಮದಲ್ಲಿ ಇರುತ್ತದೆ. ಶ್ರೀ. ಪರಮಹಂಸ ಮತ್ತು ಅವರ ಶಿಷ್ಯರಾದ ಸ್ವಾಮಿ ವಿವೇಕಾನಂದರ ಬೃಹತ್ ದೇವಾಲಯವು ಡಿವೈನ್ ಪಾರ್ಕ್ ಜಾಗದಲ್ಲಿರುವುದಾಗಿದೆ. ಜಾಗತಿಕ ಮತ್ತು ಜಾತ್ಯಾತೀತ ಧರ್ಮಗಳಿಗೆ ಸಂಬಂಧಿಸಿ ಏಕರೂಪದ ಅಡಿಪಾಯ ಕಲ್ಪಿಸುವಲ್ಲಿ ಡಿವೈನ್ ಪಾರ್ಕ್ ಪ್ರಮುಖ ಕಾರ್ಯನಿರ್ವಹಿಸುತ್ತಿದೆ. ಗುರುನರಸಿಂಹ ದೇವಸ್ಥಾನದ ಬಳಿ ಸಂಸ್ಕ್ರತ ಪಾಠಶಾಲೆಯಿದ್ದು, ಈ ಶಾಲೆಯಲ್ಲಿ ಸರಿ ಸುಮಾರು 100ಕ್ಕು ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಾಲಿಗ್ರಾಮ ಪಟ್ಟಣದಿಂದ ಪಶ್ಚಿಮಕ್ಕೆ 2 ಕಿ.ಮೀ. ದೂರದಲ್ಲಿ ಅರಬೀ ಸಮುದ್ರವಿದ್ದು, ಕರಾವಳಿ ತೀರವು ಹಾಗೂ ಕೃಷಿಯು ಕಣ್ಮನ ಸೆಳೆಯುವಂತಿದೆ.
==================================
Brief Introduction of Saligrama TP:-
Saligrama is located in India, Karnataka, Udupi District, with a distance of 20 K.M. from Udupi city. There are buses which pass through this village from Udupi. Most buses which go to Kundapura pass by this village. The name is derived from the sacred stone Saligrama worshipped by the Vaishnavas (Hindus) as an anaconic symbol of Lord Vishnu (Hindu God). Famous Kannada writer K. Shivananda Karantha, winner of Padmabhushana and Jnanapeetha awards hails from this village. One can see "Divine Park" located here, its a peaceful place where people meditate, and there is a book store located inside. The Divine Park in the village has a unique temple dedicated to Ramakrishna Paramahamsa and Swami Vivekananda, an abode of Gods and Goddesses and a unique platform of Universal Religion. There is a Sanskrit school near Gurunarasimha temple (or within) where, annually more than 100 students are being taught. To west of this town about 2 KM far where the Arabian Sea exists, which attracts people through the sight.
...........................................................................................................
ಪಟ್ಟಣ ಪಂಚಾಯತ್ ಧ್ಯೇಯೋದ್ಧೇಶಗಳು: ಪ.ಪಂ. ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜು, ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದು, ಪ.ಪಂ.ನ ವ್ಯಾಪ್ತಿಯೊಳಗಿನ ಎಲ್ಲಾ ದಾರಿಗಳಿಗೆ ದಾರಿದೀಪದ ಅಳವಡಿಕೆ, ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ನಗರವನ್ನು ಸುಂದರವಾಗಿಡುವುದು. ಉತ್ತಮ ರೀತಿಯ ರಸ್ತೆ, ಚರಂಡಿಯನ್ನು ಒದಗಿಸಿ ಸಾರಿಗೆ ವ್ಯವಸ್ಥೆಯನ್ನು ಸುಗಮವಾಗಿಸುವುದು. ಕೆ.ಎಂ.ಆರ್.ಪಿ. ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಜನನ-ಮರಣ ನೋಂದಣಿ, ದೂರು ನಿವಾರಣಾ ಘಟಕ, ವೆಬ್‌ಸೈಟ್, ಗಣಕೀಕೃತ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆಯನ್ನು ಒದಗಿಸುವುದು.
-------------------------------------------------------------------------------------------------------------------------------
ಗಣಕೀಕರಣ ಯೋಜನೆಗಳು:
ಜನನ-ಮರಣ ಗಣಕೀಕರಣ: ಪ.ಪಂ. ನಲ್ಲಿ ಲಭ್ಯವಿರುವ 1985 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಪ.ಪಂ. ನ ಈ ವೆಬ್‌ಸೈಟ್‌ನ ಮೂಲಕ ದಾಖಲಾತಿಗಳನ್ನು ಪರಿಶೀಲಿಸಬಹುದು.
ಸಾರ್ವಜನಿಕ ದೂರು ನಿವಾರಣಾ ಕೇಂದ್ರ: ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಬೆಳಿಗ್ಗೆ ಗಂ: 8-00 ರಿಂದ ರಾತ್ರಿ ಗಂ: 8-00 ರ ತನಕ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್‌ಲೈನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ: 0820-2564188
ಆಸ್ತಿ ತೆರಿಗೆ ಯೋಜನೆ: ಈ ಯೋಜನೆಯು ಪ್ರಗತಿಯಲ್ಲಿದ್ದು, ಈಗಾಗಲೇ 14 ವಾರ್ಡುಗಳ ಎಲ್ಲಾ ಆಸ್ತಿಗಳ ಸರ್ವೇಯನ್ನು ಮುಗಿಸಿ ಡಾಟಾವನ್ನು ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು.
ಸ್ಥಳೀಯ ಸಂಸ್ಥೆ ವೆಬ್‌ಸೈಟ್: ಸಾಲಿಗ್ರಾಮ ಪಟ್ಟಣ ಪಂಚಾಯತಿಯ ಅಧಿಕೃತ ಅಂತರ್ಜಾಲ, www.saligramatown.gov.in ಕೆ.ಎಂ.ಆರ್.ಪಿ. ಯೋಜನೆಯಡಿ ಸ್ಥಾಪಿತಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಎಲ್ಲಾ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಾವಕಾಶವಿರುವ ಕೈಗಾರಿಕಾ ತರಬೇತಿಗೆ ಅರ್ಜಿ ಅಹ್ವಾನ
------------------------------------------------------------------------------------------------------------------------------------------------------------------
ಈಮೇಲ್ : co_saligrama@yahoo.com ; itstaff_ulb_saligrama@yahoo.com
ಕಛೇರಿ ದೂರವಾಣಿ : 0820-2564229 : ಫ್ಯಾಕ್ಸ್ : 0820-2564229 : ಸಹಾಯವಾಣಿ : 0820-2564188
This page is maintained by Chief Officer, Saligrama TP
Last updated : 15-05-2012

